ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಬಲವಾದ ಬೇಡಿಕೆ ಇಟ್ಟು ಸಿಎಂ ಪಟ್ಟ ನೀಡುವಂತೆ ಆಗ್ರಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ವಾದ ಏನಿತ್ತು ಎಂಬುದನ್ನು ಇಲ್ಲಿ ನೀಡಲಾಗಿದೆ. ಸಿದ್ದರಾಮಯ್ಯ ಹೇಳಿದ್ದೇನು?ಡಿಕೆಶಿಯ ಈ ಸೂತ್ರವನ್ನು ನಾನು ಒಪ್ಪುವುದಿಲ್ಲ. ಮಾಡುವುದಾದರೇ ನನ್ನನ್ನೇ ಮೊದಲು ಸಿಎಂ ಮಾಡಿ. ನಾನು ಕೂಡ ಒಪ್ಪಂದಕ್ಕೆ ಸಿದ್ದನಿದ್ದು, ಈ ವಿಚಾರವನ್ನು ನಾನು ಈ ಮೊದಲೇ ತಿಳಿಸಿದ್ದೇನೆ. ಇದು ಸಾಧ್ಯವಾಗದೇ ಇದ್ದರೆ ನನ್ನನ್ನೇ 5 ವರ್ಷವೂ