ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳು, ನುಸಿ ಪತ್ತೆ

ಕೊಪ್ಪಳ, ಶನಿವಾರ, 14 ಜುಲೈ 2018 (19:20 IST)


 
ಶಾಲೆಯ ಮಕ್ಕಳ ಬಗ್ಗೆ ಅದೇಕೆ ನಿರ್ಲಕ್ಷ್ಯವೋ ಗೊತ್ತಿಲ್ಲ. ಸರಕಾರಿ ಶಾಲೆಯ ಮಧ್ಯಾಹ್ನದ ಊಟದ ಪಾಡಂತೂ ಆ ದೇವರಿಗೆ ಪ್ರೀತಿ… ಇಲ್ಲೊಂದು ಶಾಲೆಯ ಮಕ್ಕಳ ಊಟದಲ್ಲಿ ಹುಳು, ನುಸಿ ಪತ್ತೆಯಾಗಿವೆ.
 
ಕೊಪ್ಪಳ ಜಿಲ್ಲೆಯ ಗುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಯಾರಿಸಿದ ಬಿಸಿಯೂಟದಲ್ಲಿ ಹುಳಗಳು, ನುಸೀ ಪತ್ತೆಯಾಗಿವೆ.
ಶಾಲೆಯ ಬಿಸಿ ಯೂಟ ತಯಾರಕರು ಮತ್ತು ಶಾಲೆಯ ಮುಖ್ಯ ಗುರುಗಳ ನಿರ್ಲಕ್ಷದಿಂದ ಈ ಘಟನೆ ನಡೆದಿದೆ.   ಶಾಲೆಯಲ್ಲಿ ಸಭೆ ನಡೆಸಿ ಮುಖ್ಯ ಗುರುಗಳನ್ನು ಹಾಗೂ ಬಿಸಿಯೂಟ ತಯಾರಕನ್ನು ಗ್ರಾಮಸ್ಥರು ತರಾಟೆಗೆ  ತೆಗೆದುಕೊಂಡರು.
ಹಲವಾರು ದಿನಗಳಿಂದ ಶಾಲೆಯಲ್ಲಿ ತಯಾರಿಸುವ ಬಿಸಿಯೂಟದಲ್ಲಿ ಹುಳುನುಸಿ ಬರುತ್ತಿದ್ದರೂ ಸಹ  ಮೇಲಾಧಿಕಾರಿಗಳು ಗಮನಿಸದೇ ಇರುವುದು ಘಟನೆಗೆಕಾರಣ ಎನ್ನಲಾಗಿದೆಬೇವುರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆ.ಆರ್.ಎಸ್ ಭರ್ತಿ: ತಮಿಳುನಾಡಿಗೆ ಹರಿದ ನೀರು

ನಾಲ್ಕು ವರ್ಷಗಳ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯ ರೈತರಲ್ಲಿ ಸಂತಸ ಮೂಡುವಂತಾಗಿದ್ದು, ನಾಲ್ಕು ...

news

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸ್ವಾಗತ

ತುಮಕೂರು ಜಿಲ್ಲೆ ವಿಶ್ವ ಭೂಪಟದಲ್ಲಿ ಸೇರುವ ಕಾಲ ಹತ್ತಿರವಾಗಿದೆ. 40 ವರ್ಷಗಳ ಇತಿಹಾಸ ಹೊಂದಿದ್ದ ...

news

ಆಹಾರ ಇಲಾಖೆ ಗೋದಾಮಿನಲ್ಲಿ 1,000 ಕ್ವಿಂಟಾಲ್ ಅಕ್ಕಿ ಮಾಯ?

ಅನ್ನ ಭಾಗ್ಯ ಅಕ್ಕಿಗೆ ಖನ್ನ ಹಾಕಿರುವ ಅಧಿಕಾರಿಗಳು, ನಂಜುಂಡೇಶ್ವರನ ಊರಲ್ಲೇ ಭಾರಿ ಗೋಲ್ ಮಾಲ್ ನಡೆದಿರುವ ...

news

ಗೊರೂರಿನಲ್ಲಿ ಸಚಿವ ಹೆಚ್.ಡಿ.ರೇವಣ್ಣ ಏನೆಂದರು?

ಸಚಿವ ಹೆಚ್.ಡಿ.ರೇವಣ್ಣ ಸ್ವ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ರಾಜ್ಯಾದ್ಯಂತ ಮಳೆ ಧಾರಕಾರವಾಗಿ ...