ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತೆ ಜಾರಿ ಮಾಡಲು ಸಿದ್ಧತೆಗಳು, ಚಿಂತನೆಗಳು ನಡೆಯುತ್ತಿವೆ ಎಂದು ಡಿಸಿ ತಿಳಿಸಿದ್ದಾರೆ. ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹಾಗೂ ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಹಾಕಲು ನರಸಿಂಹರಾಜ ಕ್ಷೇತ್ರವನ್ನು ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಮಾಡಿದಂತೆ ಲಾಕ್ ಡೌನ್ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿ ಅಭಿರಾಮ್ ಜಿ.ಶಂರ್ ಹೇಳಿದ್ದಾರೆ. ಲಾಕ್ ಡೌನ್ ಜಾರಿ ಮಾಡುವುದರಿಂದ ಕೊರೊನಾ