ಪೀತಾಂಬರ ಪೀಠಕ್ಕೆ ತೆರಳುತ್ತಿರುವ ಬಗ್ಗೆ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು,ಹಿಂದೆ ನೆಹರು ಯುದ್ಧ ನಿಲ್ಲುವಂತೆ ಹರಕೆ ಹೊತ್ತಿದ್ದ ಪವಿತ್ರ ಕ್ಷೇತ್ರವಾದ ಗ್ವಾಲಿಯರ್ ನಲ್ಲಿರುವ ಪೀಠಕ್ಕೆ ನಾನು ಹೋಗ್ತಿದ್ದೇನೆ.ಒಂದಷ್ಟು ಫಲಗಳು ಲಭಿಸಿದ ಮೇಲೆ ಬರುವುದಾಗಿ ಅಂದುಕೊಂಡಿದ್ದೆ.ಹೀಗಾಗಿ ಗ್ವಾಲಿಯರ್ ತೆರಳುತ್ತಿದ್ದೇನೆ.ಒಂದಷ್ಟು ಸಮಯ ಬದಲಾವಣೆ ಮಾಡಿಕೊಳ್ಳಬೇಕಾಯಿತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.