ವಾಲ್ಮೀಕಿ ಸಮುದಾಯ ಮತ್ತು ಪರಿಶಿಷ್ಟ ಜಾತಿ ಸಮುದಾಯದ 152 ಜಾತಿಗಳು ಇಂದು ಐತಿಹಾಸಿಕ ಕ್ಷಣದಲ್ಲಿವೆ. ನಮ್ಮ ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ. ಸಿಎಂ ಬೊಮ್ಮಾಯಿ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾನು ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡ್ತಿದ್ದಾರೆ. SC ಸಮುದಾಯಕ್ಕೆ 15ರಿಂದ 17, ST ಸಮುದಾಯಕ್ಕೆ 3-7 ರಷ್ಟು ಮೀಸಲಾತಿ ಏರಿಕೆ