ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಕೆಎಸ್ಪಿಸಿಬಿ ಅಧ್ಯಯನದಲ್ಲಿ ಆಶ್ಚರ್ಯಕರ ಸಂಗತಿ ಬಯಲಾಗಿದೆ. ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಸಾರಿಗೆ ವ್ಯವಸ್ಥೆ, ಸಿಟಿಯ ಟ್ರಾಫಿಕ್ ಜಾಮ್, ಟ್ರಾಫಿಕ್ ಸಿಗ್ನಲ್, ರಸ್ತೆ ಕಾಮಗಾರಿ ವಿಳಂಬವೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕೊವಿಡ್ ಪ್ರಕರಣಗಳು ಹೆಚ್ಚಾಗಿದ್ದ ವೇಳೆ ವಾಯು ಮಾಲಿನ್ಯ ತಗ್ಗಿತ್ತು. ಆದರೆ ಇದೀಗ ಯಥಾಸ್ಥಿತಿ ಕೆಲಸಗಳು ಶುರುವಾಗಿರುವ ಹಿನ್ನೆಲೆ ವಾಯು ಮಾಲಿನ್ಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಾಯು ಮಾಲಿನ್ಯದ