ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ಸ್ವಾತಂತ್ರ್ಯದಿನಾಚರಣೆಗೂ ಒಂದು ದಿನ ಮೊದಲೇ ನವದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕನ್ನಾಟ್ ಪ್ರದೇಶದಲ್ಲಿ ವಾಯುಪಡೆಯ ಸಮವಸ್ತ್ರದಲ್ಲಿ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಾಯುಪಡೆಯ ಶೂ ಬದಲಿಗೆ ಕಾಲಿಗೆ ಕ್ರೀಡಾ ಕ್ರೀಡಾ ಶೂ ಧರಿಸಿದ್ದ. ಅಲ್ಲದೇ ಆ ವ್ಯಕ್ತಿಯ ಅನುಮಾನಾಸ್ಪದ ವರ್ತನೆಯನ್ನು ಸೇನಾ ಪಡೆಯ ನಿವೃತ್ತ ಯೋಧರು ಗಮನಿಸಿದರು. ವಾಯುಪಡೆಯ ಸಮವಸ್ತ್ರದಲ್ಲಿ ಅನುಮಾನಾಸ್ಪದವಾಗಿ ಕಂಡ