ಸ್ವಾತಂತ್ರ ದಿನಾಚರಣೆ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡುವ ಭಾಷಣ ಸ್ಥಳೀಯ ಭಾಷೆಗಳಿಗೆ ಭಾಷಾಂತರವಾಗಲಿವೆ. ಅಷ್ಟೇ ಅಲ್ಲ, ಕೆಂಪು ಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮ ವಿಶ್ವವ್ಯಾಪಿ ಪ್ರಸಾರವಾಗಲಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಆಗಸ್ಟ್ 15ರ ಸ್ವತಂತ್ರ ದಿನಾಚರಣೆ ಕಾರ್ಯಕ್ರಮಗಳು ದಾಖಲೆಗೆ ಕಾರಣವಾಗುತ್ತಿವೆ. ಪ್ರಥಮ ಬಾರಿಗೆ ವಿಶ್ವಾದ್ಯಂತ ಸ್ವಾತಂತ್ರ ದಿನದ ಕಾರ್ಯಕ್ರಮಗಳು ನೇರ ಪ್ರಸಾರಗೊಳ್ಳಲಿವೆ.ದೂರದರ್ಶನದ ನಿರೂಪಕರು ನೇರವಾಗಿ ಕೆಂಪು ಕೋಟೆಯಿಂದ ವಿವರ, ಮಾಹಿತಿ ನೀಡಲಿದ್ದಾರೆ. 20 ಭಾಷೆಗಳಿಗೆ ಪ್ರಧಾನಿ ಭಾಷಣ ಭಾಷಾಂತರವಾಗಲಿದೆ.