ರಾಜಕೀಯ ಜಿದ್ದಾ ಜಿದ್ದಿನಿಂದಲೆ ಹೆಸರುವಾಸಿಯಾಗಿರುವ ಹೊಸಕೋಟೆಯಲ್ಲಿ ಇದೀಗ ಕೈ ಪಾಳಯದಲ್ಲೆ ಕಲಹ ಶುರುವಾಗಿದ್ದು ಕೈ ನಾಯಕರ ವಿರುದ್ದ ಮುಖಂಡರು ಆಕ್ರೋಶಗೊಂಡಿದ್ದಾರೆ. ಮನೆಯೊಂದು ಮೂರು ಬಾಗಿಲು ಎಂಬಂತೆ ಕ್ಷೇತ್ರದ ಕಾಂಗ್ರೇಸ್ ಪರಿಸ್ಥಿತಿಯಾಗಿದ್ದು ಶಾಸಕ ಶರತ್ ವಿರುದ್ದ ಸಿಡಿದೆದ್ದ ಮೂಲ ಕಾಂಗ್ರೇಸ್ಸಿಗರು ಇದೀಗ ಬಿಜೆಪಿಯ ಕದ ತಟ್ಟಿದ್ದಾರೆ.ಹೊಸಕೋಟೆ ರಾಜ್ಯ ರಾಜಧಾನಿಗೆ ಹೊಂದಿಕೊಂಡಿರುವ ಹೆಬ್ಬಾಗಿಲಿನಲ್ಲಿರುವ ಈ ಕ್ಷೇತ್ರ ಅಭಿವೃದ್ದಿಗಿಂತ ರಾಜಕೀಯ ಕೆಸರೆರಚಾಟ ಹೊಡೆದಾಟ ಬಡಿದಾಟದಿಂದಲೆ ಸದ್ದು ಮಾಡಿದ್ದು ಹೆಚ್ಚು. ಇದೀಗ ಮತ್ತೆ ಚುನಾವಣೆ ಸಮೀಪಿಸುತ್ತಿರುವ