ನವದೆಹಲಿ : ಇಡೀ ವಿಶ್ವವನ್ನೇ ನಡುಗಿಸಿದ ಕೊರೊನಾ ಹೆಮ್ಮಾರಿಗೆ ಭಾರತದಲ್ಲೇ ಮದ್ದು ಕಂಡುಹಿಡಿಯಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಡಿಸೆಂಬರ್ ಅಂತ್ಯಕ್ಕೆ ಕೊರೊನಾ ಲಸಿಕೆ ಲಭ್ಯವಾಗಲಿದೆ. ಬ್ರಿಟನ್ ನಲ್ಲಿ ಲಸಿಕೆ ಕ್ಲಿನಿಕಲ್ ಟ್ರಯಲ್ ಮಾಡಲಾಗಿದ್ದು, ಇದಕ್ಕೆ ಆಕ್ಸ್ ಫರ್ಡ್, ಆಸ್ಟಾಜನಿಕಾ ಸಂಸ್ಥೆ ಸಾಥ್ ನೀಡಿದೆ ಎನ್ನಲಾಗಿದೆ.ಬ್ರಿಟನ್ ನಲ್ಲಿ ಪ್ರಯೋಗದ ವರದಿ ತಯಾರಿಸಲಾಗಿದ್ದು, ಕ್ಲಿನಿಕಲ್ ಟೆಸ್ಟ್ ಗೆ WHO ನ ಅನುಮತಿ ಬೇಕು. ಪರವಾನಗಿ ಸಿಕ್ಕರೆ ಭಾರತದಲ್ಲೇ ‘ಕೋವಿಶೀಲ್ಡ್’ ಹೆಸರಿನಲ್ಲಿ ಲಸಿಕೆ ಉತ್ಪಾದನೆ ಮಾಡಲಾಗುವುದು.