ಬೆಂಗಳೂರು: ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಸಹೋದರ ಹಾಗೂ ಚಿತ್ರ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಕ್ಕನ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸಿರುವ ಅವರು ಎಲ್ಲಾ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.ಹಲವು ಬಾರಿ ಅಕ್ಕನಿಗೆ ಪೊಲೀಸ್ ರಕ್ಷಣೆ ಕೊಡಿ ಎಂದು ಕೇಳಿದ್ದರೂ, ಕಿವಿಗೊಡಲಿಲ್ಲ ಎಂದು ದೂರಿರುವ ಅವರು, ಓರ್ವ ಮಹಿಳೆ, ವಿಚಾರವಾದಿ, ಹೋರಾಟಗಾರ್ತಿಯನ್ನು ಕೊಲ್ಲಲಾಗಿದೆ.