ಕಳೆದ 99 ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಕಾಡಾನೆ ಸಿದ್ದ ಇನ್ನೇನು ಎದ್ದು ಓಡಾಡುತ್ತಾನೆ ಎನ್ನುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಆತನ ಆರೋಗ್ಯ ಸುಧಾರಣೆಗಾಗಿ ನಡೆಸಿದ ಎಲ್ಲ ಪೂಜೆ ಪುನಸ್ಕಾರಗಳು, ಹಾರೈಕೆಗಳೆಲ್ಲ ನಿಷ್ಫಲವಾಗಿದ್ದು ಗುರುವಾರ- ಶುಕ್ರವಾರ ನಡುವಿನ ರಾತ್ರಿ 2 ಗಂಟೆಗೆ ನಮ್ಮನಗಲಿದ್ದಾನೆ. ಕಳೆದ ಆಗಸ್ಟ್ 30 ರಂದು ಕಾಲುವೆಯಲ್ಲಿ ಬಿದ್ದು ಕಾಲು ಮುರಿದುಕೊಂಡ ಸಿದ್ದನಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಲಿಲ್ಲ. ನೋವಿನಿಂದ ಒದ್ದಾಡುತ್ತಿದ್ದ ಸಿದ್ದನ ಚಿಕಿತ್ಸೆಗೆ ಪ್ರತಿಭಟನೆಗಳು ನಡೆದು, ಮಾಧ್ಯಮಗಳಲ್ಲಿ ಆತನ ಕುರಿತು