ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ವಿನೂತನ ಪ್ರತಿಭಟನೆ

bangalore| geetha| Last Modified ಗುರುವಾರ, 25 ನವೆಂಬರ್ 2021 (20:38 IST)
ಮಾಗಡಿ ರಸ್ತೆಯಲ್ಲಿ ಗುಂಡಿಗಳು ಸಾವಿಗಾಗಿ ಬಾಯಿತೆರೆದು ಹಲವು ವರ್ಷಗಳೇ ಕಳೆದಿದೆ. ಈಗಾಗಲೇ ಅನೇಕ ವಾಹನ ಸವಾರರನ್ನ ಬಲಿ ಪಡೆದಿದೆ. ಮಾಧ್ಯಮಗಳು ಈ ಬಗ್ಗೆ ಸಾಕಷ್ಟು ವರದಿಗಳನ್ನು ಮಾಡಿದೆ. ಇಷ್ಟಾದ್ರೂ ಪಾಲಿಕೆ ಮಾತ್ರ ಎಚ್ಚೆತ್ತುಕೊಂಡಿಲ್ಲ.
ಈ ಹಿನ್ನೆಲೆ ಹಾಳು ಅದ್ವನಾವಾಗಿರುವ ಸುಂಕದಕಟ್ಟೆ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಬಿಬಿಎಂಪಿ ಪ್ರತಿಕೃತಿಯನ್ನ ಶವಯಾತ್ರೆ ಮಾಡಿ ಅದೇ ಪ್ರತಿಕೃತಿಯನ್ನ ರಸ್ತೆ ಗುಂಡಿಯಲ್ಲಿ ಮುಚ್ಚಿ, ಮಡಿಕೆ ಹೊಡೆದು, ತಲೆ ಬೋಳಿಸಿಕೊಂಡು,ಪೂಜೆ ಮಾಡಿ, ಹಾಲು ತುಪ್ಪ ಬಿಟ್ಟು, ಶಾಸ್ತ್ರಬದ್ದವಾಗಿ ಅಂತ್ಯಕ್ರಿಯೆ ಮಾಡುವ ಮೂಲಕ
ಹಾಗೂ ಬೈಕ್ ಶವಯಾತ್ರೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗುವುದು.


ಇದರಲ್ಲಿ ಇನ್ನಷ್ಟು ಓದಿ :