ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಸಾಲಮನ್ನಾ ಯೋಜನೆಯಡಿ ಪ್ರಾಥಮಿಕ ಸಹಕಾರಿ ಸಂಘ ಗಳಿಗೆ ಅನ್ವಯವಾಗುವ ಸಾಲಮನ್ನಾ ಯೋಜನೆ ಜನರಿಗೆ ದಕ್ಕುತ್ತಿಲ್ಲ. ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದ್ದು, ಬಡ್ಡಿಯನ್ನು ರಾಜ್ಯಸರ್ಕಾರ ಭರಿಸುತ್ತಿದೆ. ಆದ್ರೆ ಈ ಬಡ್ಡಿಯ ಹಣ ಸಂಘಗಳಿಗೆ ಸರಿಯಾದ ಸಮಯದಲ್ಲಿ ಸಂದಾಯವಾಗುತ್ತಿಲ್ಲ ಎಂದು ಸಹಕಾರಿ ಸಂಘಗಳ ಒಕ್ಕೂಟ ಆರೋಪಿಸಿದೆ.ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತಾಲೂಕು ಪಂಚಾಯತ್ ಸಭಾಂಗಣಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟ, ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗೆ 297 ಕೋಟಿ ಬರಬೇಕಿದ್ದು,15