ಭೂವಿಜ್ಞಾನ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಮುನಿರತ್ನ ಅವರನ್ನ ತನಿಖೆಗೆ ಒಳಪಡಿಸುವಂತೆ ಕೆಪಿಸಿಸಿ ಕಾನೂನು ಘಟಕದ ಸೂರ್ಯ ಮುಕುಂದರಾಜ್ ಒತ್ತಾಯ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪೊಲೀಸ್ ಇಲಾಖೆಗೆ ಒತ್ತಾಯ ಮಾಡಿದ್ದು,ಮಾಜಿ ಸಚಿವ ಮುನಿರತ್ನ ಮೇಲಿನ ಪ್ರಕರಣದ ಪತ್ರಗಳನ್ನು ಉಲ್ಲೇಖಿಸಿ ಪೊಸ್ಟ್ ಮಾಡಿದ್ದಾರೆ.ಹುಣಸೆಮಾರನಹಳ್ಳಿ ಬಳಿ ಪರವಾನಗಿ ಪಡೆಯದೆ ಬಂಡೆಗಳ ಸ್ಪೋಟಗೊಂಡಿದೆ.ಈ ಸಂಬಂಧ ವರದಿ ತಯಾರಿಸಿ ಕಳೆದ ಜುಲೈನಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರತಿಮಾ ವರದಿ ನೀಡಿದ್ದಳು.