ಮಹಿಳಾ ಪಿಎಸ್ಐ ರೂಪಾ ತಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಜಯನಗರ ಇನ್ಸ್ಪೆಕ್ಟರ್ ಸಂಜೀವ್ ಗೌಡ ಅವರನ್ನು ವರ್ಗಾವಣೆಗೊಳಿಸಿ ಡಿಜಿಪಿ ಆದೇಶ ಹೊರಡಿಸಿದ್ದಾರೆ. ಒಟ್ಟು 52 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ಡಿಜಿಪಿ ಅವರು ಆದೇಶ ಹೊರಡಿಸಿದ್ದು, ವಿಕಾಸಸೌಧದ ಭದ್ರತಾ ವಿಭಾಗಕ್ಕೆ ಸಂಜೀವ್ ಗೌಡ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಪಿಎಸ್ಐ ರೂಪಾ ಆತ್ಮಹತ್ಯೆ ಯತ್ನಕ್ಕೆ ಸಂಜೀವ್ ಗೌಡ ನೀಡಿದ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತು. ರೂಪಾ ತಂಬದ ಅವರು ಜುಲೈ 19