ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಹಾಗೂ ಗಡುವು ಮೀರಿ ಕಾರ್ಯನಿರ್ವಹಿಸುವ ಕ್ಲಬ್-ಪಬ್ ಹಾಗೂ ಇಸ್ಟೀಟ್ ಅಡ್ಡೆಗಳನ್ನು ಮುಲಾಜಿಲ್ಲದೆ ಮುಚ್ಚಬೇಕು,ಅಕ್ರಮ ಎಸಗುವ ಯಾವುದೇ ಪೋಲಿಸರನ್ನ ಕ್ಷಮಿಸೋ ಮಾತೇಯಿಲ್ಲ. ನಮ್ಮ ರಾಜ್ಯದ ಪೊಲೀಸರ ಕಾರ್ಯ ದಕ್ಷತೆ ಬಗ್ಗೆ ಹೆಮ್ಮೆಯಿದೆ ಎಂದು ಗೃಹ ಸಚಿವರು ಶ್ಲಾಘನೆ ಮಾಡಿದ್ರು. ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಬ್, ಪಬ್ ಹಾಗೂ ಇಸ್ಟೀಟ್ ಅಡ್ಡೆಗಳಿದ್ದರೆ ಅಂತಹವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಸುವಂತೆ ಸೂಚಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಗಮನಕ್ಕೆ ಬಂದಿದೆ.