Widgets Magazine

ಸಿದ್ದಾರ್ಥ ಹೆಗಡೆ ಕಾರು ಚಾಲಕನ ತೀವ್ರ ವಿಚಾರಣೆ

ಮಂಗಳೂರು| Jagadeesh| Last Modified ಮಂಗಳವಾರ, 30 ಜುಲೈ 2019 (12:17 IST)
ಬಿಜೆಪಿ ಹಿರಿಯ ಮುಖಂಡ ಅವರ ಅಳಿಯ, ಉದ್ಯಮಿ ಸಿದ್ಧಾರ್ಥ್ ಹೆಗಡೆ ನಾಪತ್ತೆ ಪ್ರಕರಣಕ್ಕೆ ಸಂಬಂಧ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿರೋ ಪೊಲೀಸರು ಸಿದ್ಧಾರ್ಥ್ ಅವರ ಬಗೆಗೆ ವಿಚಾರಣೆ ನಡೆಸುತ್ತಿದ್ದಾರೆ.
ಚಾಲಕ ಬಸವರಾಜ್ ಪಾಟೀಲ್ ಜತೆಗೆ ಕಾರಿನಲ್ಲಿ ಸಿದ್ಧಾರ್ಥ ಹೆಗಡೆ ಪ್ರಯಾಣ ಬೆಳೆಸಿದ್ದರು. ಕಾರು ಸಕಲೇಶಪುರ ಕಡೆಗೆ ಹೊರಟಿತ್ತು. ಆದರೆ ಪುನಃ ಕಾರನ್ನು ತಿರುಗಿಸಲು ಹೇಳಿದ್ದಾರೆ.

ನೇತ್ರಾವತಿ ನದಿಯ ಸೇತುವೆ ಬಳಿ ಕಾರು ನಿಲ್ಲಿಸಿದ್ದಾಗಿ ಚಾಲಕ ಹೇಳಿದ್ದಾನೆ. ಸೇತುವೆ ಬಳಿಯಿಂದಲೇ ಸಿದ್ದಾರ್ಥ್ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸ್ ಹಿರಿಯ ಅಧಿಕಾರಿಗಳು ಬಸವರಾಜ್ ಪಾಟೀಲ್ ನನ್ನು ಪ್ರಶ್ನಿಸುತ್ತಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :