ಬೆಳಗಾವಿ: ದ್ವಿ ಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮೇಲೆ ಸಾಲ ಪಡೆದು ಚೆಸ್ಸಿ ನಂಬರ್ ಬದಲಾಯಿಸಿ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ವಂಚಕ ಜಾಲವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡ ವಾಹನಗಳ ಜತೆ ಎಸ್ಪಿ ರವಿಕಾಂತೇಗೌಡ ಮತ್ತು ಸಿಬ್ಬಂದಿ. ವಾಸುದೇವ ನಾಯಕ, ಚಂದ್ರಕಾಂತ ಗಾಡಿವಡ್ಡರ, ಮಹೇಶ ಗಾಡಿವಡ್ಡರ, ಉಸ್ಮಾನ್ ಮನಿಯಾರ್, ಮಹಾವೀರ ಗಾಡಿವಡ್ಡರ, ಪ್ರಭಾಕರ ಪೋಳ, ವಿನಾಯಕ ಪೋಳ, ರಾಮಪ್ಪ ಗಾಣಿಗೇರ ಎಂಬುವರೇ ಬಂಧೀತ ಆರೋಪಿಗಳಾಗಿದ್ದಾರೆ.