ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್-ಕಂಟ್ರಿ (ಪುರುಷ ಮತ್ತು ಮಹಿಳೆ) ಚಾಂಪಿಯನ್ಶಿಪ್-2018-19ರ ಪ್ರಯುಕ್ತ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಿಂದ ಪ್ರಾರಂಭಗೊಳ್ಳುವ ಚಾಂಪಿಯನ್ಶಿಪ್ನ ಓಟಕ್ಕೆ ಅಕ್ಟೋಬರ್ 4 ರಂದು ಚಾಲನೆ ಸಿಗಲಿದೆ.ಅಂದು ಬೆಳಿಗ್ಗೆ 6 ಗಂಟೆಗೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಲಿದ್ದಾರೆ. ಸಚಿವರ ಜೊತೆಗೆ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ರವೀಂದ್ರ ಎಂ. ಕುರುಬಗಟ್ಟಿ, ಎಸ್.ಎನ್.