ಅಂತರ್ಜಾತಿ ವಿವಾಹವಾದ 21 ವರ್ಷದ ನೀರಜ್ಕುಮಾರ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಭಯಾನಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಕೊಲೆಯ ಹಿಂದೆ ಈತ ಮದುವೆಯಾದ ಯುವತಿ ಮನೆಯವರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹೈದರಾಬಾದ್ನ ಜನನಿಬಿಡ ಪ್ರದೇಶವಾದ ಬೇಗಂ ಬಜಾರ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ..ಯುವಕ ತನ್ನ ಬೈಕ್ನಲ್ಲಿ ಬರುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ಐವರು ದುಷ್ಕರ್ಮಿಗಳ ತಂಡ ಯುವಕನಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾರೆ. ನೀರಜ್ಕುಮಾರ್ ವರ್ಷದ ಹಿಂದೆ ಬೇರೆ