ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ನಡೆದ ಎಟಿಎಂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರಾಜ್ಯ ಎಟಿಎಂ ಕಳ್ಳನನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಹಾಗೂ ಆನೇಕಲ್ ತಾಲೂಕಿನಾದ್ಯಂತ ದರೋಡೆ, ಮನೆ ಕಳ್ಳತನ ಮತ್ತು ಎಟಿಎಂ ಕಳವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದವು. ಮೂರು ತಿಂಗಳ ಹಿಂದೆ ಸರ್ಜಾಪುರ ಪಟ್ಟಣದ ವಿಜಯ ಬ್ಯಾಂಕ್ ಎಟಿಎಂನಲ್ಲಿ ಇಬ್ಬರು ಅಂತರಾಜ್ಯ ಕಳ್ಳರು ಕಳ್ಳತನ ಮಾಡಲು ಮುಂದಾಗಿ ರಾತ್ರಿ ಪೂರ್ಣ ಪ್ರಯತ್ನ ಮಾಡಿ