PSI ಅಕ್ರಮದ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೋವೊಂದು ಬಿಡುಗಡೆ ಮಾಡಿದ್ದಾರೆ..ಜೊತೆಗೆ ಈ ಅಕ್ರಮದ ಬಗ್ಗೆ ತನಿಖೆ ನಡೆಯಬೇಕು ಅಂತ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಮಾಹಿತಿ ನೀಡಿ ಈ ಅಕ್ರಮ ಎಸಗಿದ್ದಾರೆ ಅಂತ ಹೇಳಿದ್ದರು.. ಆದ್ರೀಗ ಇವರ ವಿರುದ್ಧವೇ ಬಿಜೆಪಿ ಬಾಣ ಬೀಸಿದೆ. ಸಚಿವ ಸುನೀಲ್ ಕುಮಾರ್, ಪ್ರಿಯಾಂಕ್ ಖರ್ಗೆಯನ್ನೇ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆ ಪೂರ್ಣವಾಗಬೇಕಾದ್ರೆ ಪ್ರಿಯಾಂಕ್ ಖರ್ಗೆಯನ್ನು ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ತನಿಖೆ ಪೂರ್ಣವಾಗಲ್ಲ