ಕಡ್ದಾಯವಾಗಿ ಮಹಿಳೆಯರು ಹಿಜಾಬ್ ಧರಿಸಬೇಕು ಎಂಬ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಗೆ ಇರಾನ್ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹ್ಯಾಷ್ ಟ್ಯಾಗ್ ನೋ2ಹಿಜಾಬ್ ಎಂಬ ಅಭಿಯಾನ ಆರಂಭಿಸಿದ್ದಾರೆ. ಮಾತ್ರವಲ್ಲದೇ ಇರಾನ್ ಮಹಿಳೆಯರು ತಾವು ಹಿಜಾಬ್ಗಳನ್ನು ತೆಗೆಯುತ್ತಿರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಮಾಡಿ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜುಲೈ 12ನ್ನು ಹಿಜಾಬ್ ಮತ್ತು ಪರಿಶುದ್ಧತೆಯ ದಿನ ಎಂದು ಇರಾನ್ ನಲ್ಲಿ ಷೋಷಿಸಲಾಗಿದ್ದು ಮಹಿಳೆಯರು ಹಿಜಾಬ್ ಧರಿಸಲು ಒತ್ತಾಯಿಸುವ ನಿಯಮಗಳ