ಕಾಂಗ್ರೆಸ್ ಪಕ್ಷ ಬಸ್ ರೈಡ್ ತರ...ಹತ್ತಿದ ಮೇಲೆ ಕೊನೆತನಕ ಕುಳಿತುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಇದ್ದರೆ ಹಿರಿತನವೂ ಇರುತ್ತೆ, ಅಧಿಕಾರವೂ ಸಿಗುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಇರೋದೆ ಒಂದು ಸೌಭಾಗ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿ ಮತ್ತೆ ಬರುತ್ತಿರುವವರಿಗೆ ಪರೋಕ್ಷವಾಗಿ ಡಿಕೆಶಿ ಕುಟುಕಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಎಲ್ಲಾ 5 ಯೋಜನೆಗಳು ಜಾರಿಯಾಗಿವೆ.ವ್ಯಕ್ತಿಗಿಂತ ಪಕ್ಷದ ಕಾರ್ಯಕ್ರಮ ಬಹಳ ಮುಖ್ಯ.