ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿರೋ ಹೇಳಿಕೆಯನ್ನು ಸಚಿವರೊಬ್ಬರು ಸಮರ್ಥನೆ ಮಾಡಿಕೊಂಡಿದ್ದು ಬಿಎಸ್ ವೈ ಪರ ಬ್ಯಾಟ್ ಬೀಸಿದ್ದಾರೆ.ಸಾರ್ವಜನಿಕ ಜೀವನವೇ ತಂತಿ ಮೇಲಿನ ನಡಿಗೆ. ದಾರಿ ತಪ್ಪಿದರೂ ನಾವು ಸರಿಯಾದ ಗುರಿ ತಲುಪಲಾಗಲ್ಲ. ಹಾಗಾಗಿ ಸರಿಯಾದ ಗುರಿ ಇಟ್ಟು ಮುನ್ನಡೆಯಬೇಕು. ತತ್ವದ ಮೇಲೆ ಕೆಲಸ ಮಾಡಿದ್ರೆ ಗುರಿ ತಪ್ಪಲ್ಲ. ನಮ್ಮದು ತತ್ವ ಸಿದ್ದಾಂತ ಹೊಂದಿರುವ ಪಕ್ಷವಾಗಿದೆ.ಮುಖ್ಯಮಂತ್ರಿ ಮಾತ್ರವಲ್ಲ ಎಲ್ಲ ಶಾಸಕರ ಜೀವನ ತಂತಿ ಮೇಲಿನ ನಡಿಗೆಯೇ ಆಗಿದೆ.