ಮಂಗಳೂರು: ರಾಜ್ಯ ವಿಧಾನಸಭೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರಗಳ ಬಗ್ಗೆ ಬಿಜೆಪಿ ಆಕ್ಷೇಪವೆತ್ತಿರುವ ಬೆನ್ನಲ್ಲೇ ಈ ಅಗ್ಗದ ದರದ ಕ್ಯಾಂಟೀನ್ ಬಗ್ಗೆ ಹಲವು ಅನುಮಾನಗಳು ಮೂಡಿವೆ.ಸಿದ್ದರಾಮಯ್ಯ ಸರ್ಕಾದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ನಿಜಕ್ಕೂ ಯಶಸ್ವಿಯಾಗಿದೆಯಾ? ಈ ಬಗ್ಗೆ ವಸತಿ ಸಚಿವ ಯುಟಿ ಖಾದರ್ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.ಇಂದಿರಾ ಕ್ಯಾಂಟೀನ್ ಯಶಸ್ವಿಯಾಗಿ ಸಾಗುತ್ತಿದೆ. ಆದರೆ ಬಿಜೆಪಿಯವರು ಸೂಕ್ತ ಮಾಹಿತಿ ಇಲ್ಲದೇ ಜನರಲ್ಲಿ ಈ ಕ್ಯಾಂಟೀನ್ ಬಗ್ಗೆ ಇಲ್ಲದ ಗೊಂದಲ ಮೂಡಿಸುತ್ತಿದ್ದಾರೆ.