ಪತ್ನಿ ಅಡುಗೆ ಮಾಡಿಲ್ಲವೆಂದು ಕೋಪಗೊಂಡ ಪತಿರಾಯ ಪತ್ನಿಯನ್ನೇ ಕೊಲೆಗೈದಿರುವ ಘಟನೆ ನೆಲಮಂಗಲ ತಾಲ್ಲೂಕಿನ ಸೂಲಕುಂಟೆಯಲ್ಲಿ ಜರುಗಿದೆ. ಲಕ್ಷ್ಮೀ ನರಸಮ್ಮ(40) ಎಂಬ ಗೃಹಿಣಿಯೇ ಮೃತಪಟ್ಟಿದ್ದಾಳೆ. ಪತಿ ವೆಂಕಟೇಶ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಅಡುಗೆ ಮಾಡದ ಪತ್ನಿಯ ವಿರುದ್ಧ ಸಿಟ್ಟಾದ ಪತಿ ಕೋಲಿನಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಗೃಹಿಣಿ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವೆಂಕಟೇಶನನ್ನು ಬಂಧಿಸಿದ್ದಾರೆ. ತಾಜಾ ಸುದ್ದಿಗಳನ್ನು ಓದಲು