ಉತ್ತರ ಭಾರತದಲ್ಲಿ ಯಾವುದೇ ಆತಂಕ, ಭಯ ಅನ್ನೊದೇ ಇಲ್ಲ ನಮೋ ನೇತೃತ್ವದ ಬಿಜೆಪಿಗೆ. ಅದರಲ್ಲೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದಲ್ಲಿ ದಿನಕ್ಕೊಂದು ಬಿರುಕು ಕಾಣಿಸಿಕೊಳ್ತಿದೆ. ಒಬ್ಬರ ನಂತರ ಒಬ್ಬರು ಎಂಬುವAತೆ ಮಹಾಘಟಬಂಧನ್ಗೆ ಶಾಕ್ ಮೇಲೆ ಶಾಕ್ ನೀಡುತ್ತಾ ಬರ್ತಾ ಇದ್ದಾರೆ.ಈಗ ನಮೋಗೆ ಇಂಡಿಯಾ ಮಹಾಮೈತ್ರಿಕೂಟದಲ್ಲಿನ ವೀಕ್ನೇಸ್ಸೆ ದೊಡ್ಡ ಪ್ಲಸ್ ಪಾಯಿಂಟ್ ಆಗ್ತಾ ಇದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆರಂಭದಲ್ಲಿ ಇದ್ದ ಜೋಶ್, ಇದೀಗ ಚುನಾವಣೆ ಎದುರಾಗ್ತಾ ಇರುವ ಹೊತ್ತಲ್ಲಿ ಇಲ್ಲ ಕಾಂಗ್ರೆಸ್ ಸಾರಥ್ಯದ ಇಂಡಿಯಾ ಒಕ್ಕೂಟದಲ್ಲಿ ಅನ್ನೋದೇ ನಮೋ ಸೈನ್ಯದ ಪ್ರಚಂಡ ಧೈರ್ಯಕ್ಕೆ ಮೂಲ ಕಾರಣ.