ಬಿಎಸ್ವೈ-ಅನಂತ್ ಕುಮಾರ್ ಆಡಿಯೋ ಸಂಭಾಷಣೆ ಸಾಬೀತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಡಿಯಲ್ಲಿರುವುದು ನಮ್ಮ ಧ್ವನಿ ಅಲ್ಲ ಎಂದು ನಾವೆಂದು ಹೇಳಿಲ್ಲ. ನಮ್ಮ ಮೇಲೆ ಎಷ್ಟೇ ಎಫ್ಐಆರ್ ದಾಖಲಿಸಿದರು ಹೆದರೊಲ್ಲ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸಿದ್ದಪಡಿಸಿದ ಸಿಡಿಯಲ್ಲಿರುವುದು ನಮ್ಮ ಧ್ವನಿಯೇ. ಆದರೆ, ಸಿಡಿಯಲ್ಲಿರುವ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿಡಿ ಇಟ್ಕೊಂಡು ಏನೋ ಸಾಧನೆ ಮಾಡಿದವರಂತೆ ಸರಕಾರ ಬೀಗುತ್ತಿದೆ. ಇಂತಹ ದ್ವೇಷದ