ಚೈತ್ರಾ ಆ್ಯಂಡ್ ಗ್ಯಾಂಗ್ 5 ಕೋಟಿ ವಂಚನೆ ಮಾಡಿರುವುದು ಆಡಿಯೋದಲ್ಲಿ ಸಾಬೀತಾಗಿದ್ದು, ಆಡಿಯೋದಲ್ಲಿ ಸುನೀಲ್ ಕುಮಾರ್ ಹೆಸರನ್ನ ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆ ಮಾಜಿ ಸಚಿವ ಸುನೀಲ್ ಕುಮಾರ್ ಸಹ ಈ ಗ್ಯಾಂಗ್ನಲ್ಲಿದ್ದಾರಾ ಎಂಬ ಅನುಮಾನ ಮೂಡಿದೆ. ಆಡಿಯೋದಲ್ಲಿ ಕಾರ್ಕಳ ಎಂದ ಕೂಡಲೇ ಸುನೀಲ್ ಕುಮಾರ್ ಮನೆ ಎಂದು ಚೈತ್ರಾ ಹೇಳಿದ್ದಾಳೆ. ಸುನೀಲ್ ಕುಮಾರ್ ಹೆಸರು ಹೇಳಿ ಕಬಾಬ್ ಗ್ಯಾಂಗ್ ಹಣ ಪಡೆದಿದ್ಯಾ ಎಂಬ ದಟ್ಟ ಅನುಮಾನ ಈಗ ಪೊಲೀಸರಲ್ಲಿ ಮೂಡಿದೆ.