ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಅದರಲ್ಲೂ ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಮಾಡಲಿರುವ ಚಿತ್ತಾಪುರದಲ್ಲಿ ಕೋಲಿ ಸಮುದಾಯವೇ ನಿರ್ಣಾಯಕ. ಬಹುಸಂಖ್ಯಾತ ಕೋಲಿ ಸಮುದಾಯದ ಮತದಾರರು ಇರುವ ಚಿತ್ತಾಪುರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದ ಚಿಂಚನಸೂರ ಗ್ರೌಂಡ್ ಲೆವಲ್ನಿಂದ ಕೆಲಸ ಮಾಡಿ, ಕಾರ್ಯಕರ್ತರ ಪಡೆ ಕಟ್ಟಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಗೆಲ್ಲಬೇಕಾದ್ರೆ ಚಿಂಚನಸೂರ್ ಕಾಂಗ್ರೆಸ್ಗೆ ಅನಿವಾರ್ಯ. ಇತ್ತ