ಸೀಲ್ ಡೌನ್ ಎಂಬುದನ್ನು ಅಧಿಕಾರಿಗಳು ಹಾಗೂ ಕೆಲಸಗಾರರು ಏನು ಅಂತ ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಕೊರೊನಾ ಸೋಂಕಿತರ ಮನೆ ಬಾಗಿಲಿಗೆ ತಗಡಿನ ಟಿನ್ (ಶೀಟ್) ಹೊಡೆದಿದ್ದ ಬಿಬಿಎಂಪಿ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋಂಕಿತರ ಮನೆಯ ಗೇಟ್ ಗೆ ತಗಡು ಹೊಡೆದಿದೆ. ಬಿಬಿಎಂಪಿ ನೌಕರರು ಹಾಗೂ ಅಧಿಕಾರಿಗಳ ಎಡವಟ್ಟುತನ ಕೊರೊನಾ ಸಮಯದಲ್ಲಿಯೂ ಮುಂದುವರಿದಿದೆ. ಗೇಟ್ ಗೆ ತಗಡು ಹೊಡೆದಿರೋ ಬಿಬಿಎಂಪಿ ಸಿಬ್ಬಂದಿ ಅಲ್ಲಿಂದ ನೂರು ಮೀಟರ್ ದೂರದಲ್ಲಿ ರಸ್ತೆ