ಆಸ್ಪತ್ರೆಗಳಿಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ದೊರಕದೇ ಮಗುವೊಂದು ನರಳಿ ನರಳಿ ಜೀವ ಬಿಟ್ಟ ಘಟನೆ ನಡೆದಿದೆ. 7 ತಿಂಗಳ ಹೆಣ್ಣು ಮಗು ಚಿಕಿತ್ಸೆ ಸಿಗದೆ ಸಾವನ್ನಪ್ಪಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಲೆದರೂ ಚಿಕಿತ್ಸೆ ದೊರಕದ ಕಾರಣ ಮಗು ಸಾವವನ್ನಪ್ಪಿದೆ.ರಾಮನಗರದ ಚನ್ನಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪೇಟೆಬೀದಿ ನಿವಾಸಿ ಪ್ರದೀಪ್ ಅವರ ಪುತ್ರಿ ಜೀವ ಬಿಟ್ಟಿದ್ದಾಳೆ. ಮಗುವಿಗೆ ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಮಕ್ಕಳ