Widgets Magazine

ದೇವೇಗೌಡರ ಕಣ್ಣುತಪ್ಪಿಸಿಕೊಂಡು ಓಡಾಡುತ್ತಿದ್ದಾರಾ ಈ ಜೆಡಿಎಸ್ ನಾಯಕ?

ಮೈಸೂರು| pavithra| Last Updated: ಶುಕ್ರವಾರ, 8 ನವೆಂಬರ್ 2019 (11:01 IST)
ಮೈಸೂರು : ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಕಂಡಾಗ ಜೆಡಿಎಸ್ ನಾಯಕ ಜಿಟಿ ದೇವೇಗೌಡರು ಕಣ್ಣುತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಹೌದು. ಇಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಮೈಸೂರಿನ ಚಾಮುಂಡೇಶ್ವರಿ ಸನ್ನಿದಿಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅಲ್ಲಿಗೆ ಆಗಮಿಸಿದ  ಜಿಟಿ ದೇವೇಗೌಡರು ಡಿಕೆ ಶಿವಕುಮಾರ ದೇವಿಗೆ ಪೂಜೆ ಸಲ್ಲಿಸುವ ವೇಳೆ  ಅವರ ಜೊತೆಗಿದ್ದು ಸಾಥ್ ನೀಡಿದ್ದರು.


ಆದರೆ  ಅದೇ ಸಂದರ್ಭಕ್ಕೆ ಅಲ್ಲಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಆಗಮಿಸಿದ್ದು, ಅವರನ್ನು ಕಂಡ ಕೂಡಲೇ ಡಿಕೆಶಿ ಜೊತೆಗಿದ್ದ ಜಿಟಿ ದೇವೇಗೌಡರು ಅಲ್ಲಿಂದ್ದ ಹೋಗಿದ್ದಾರೆ ಎನ್ನಲಾಗಿದೆ. ಇದನ್ನು ಕಂಡಾಗ ಜೆಡಿಎಸ್ ವರಿಷ್ಠ ದೇವೇಗೌಡರನ್ನು ನೋಡಿ ಜೆಡಿಎಸ್ ನಾಯಕ ಜಿಟಿ ದೇವೇಗೌಡರು ಕಣ್ಣುತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂಬ ವ್ಯಕ್ತವಾಗುತ್ತದೆ. ಆದರೆ ಯಾವ ಕಾರಣಕ್ಕೆ ಅವರು ಹೀಗೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ.

ಇದರಲ್ಲಿ ಇನ್ನಷ್ಟು ಓದಿ :