ಭುವನೇಶ್ವರ್: ಪ್ರೇಯಸಿ ತನಗೆ ಮೋಸ ಮಾಡಿ ಬೇರೆಯೊಬ್ಬನನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಪ್ರಿಯಕರನೊಬ್ಬ ಆಕೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ಪರಲಖೇಮುಂಡಿಯಲ್ಲಿ ನಡೆದಿದೆ. ಗಂಜಾಂ ಜಿಲ್ಲೆಯ ಕೈದಾಡಾ ಗ್ರಾಮದ ನಿವಾಸಿ ಕುಬರ್ ಪಲ್ಲೆ ಇಂತಹ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ ಗಜಪತಿ ಜಿಲ್ಲೆಯ ಪರಲಖೇಮುಂಡಿ ಪ್ರದೇಶದ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಯುವತಿಯ ಪೋಷಕರು ಆಕೆಗೆ ಬೇರ ಯುವಕನ ಜೊತೆ ಮದುವೆ ಮಾಡಿದ್ದಾರೆ.