ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರನ್ನ ಮುಗಿಸಿದ್ದಾರೆ, ಈಗ ನನ್ನನ್ನು ಮುಗಿಸಲು ಕೋಲಾರಕ್ಕೆ ಬಂದಿದ್ದಾರೆ. ಆನೆ ಸೊಂಡಿಲಿನಿಂದ ಮಣ್ಣು ಮೇಲೆ ಹಾಕಿಕೊಂಡಂತೆ ಸಿದ್ದು ತಾನಾಗಿ ಮಣ್ಣು ಮೇಲೆ ಹಾಕಿಕೊಂಡಿದ್ದಾರೆ.ಸಿದ್ದುಗೆ ಕೇಡುಗಾಲ ಆರಂಭವಾಗಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ. ಕೋಲಾರಕ್ಕೆ ಸಿದ್ದರಾಮಯ್ಯ ಅಂತೇಳಿ ವಿಶೇಷವಾಗಿ ಪರಿಗಣಿಸುವಂತ್ತಿಲ್ಲ.ಚಾಮುಂಡಿ ಕ್ಷೇತ್ರದಲ್ಲಿ 40 ಮತಗಳ ಅಂತರದಿಂದ ಸೋತಿದ್ದಾರೆ. ಬಾದಾಮಿಯಲ್ಲಿ ಸೋಲುತ್ತಾರೆ ಅನ್ನೋ ಭಯ ಇದೆ ಎಲ್ಲರನ್ನ ಮುಗಿಸಿದ್ದಾರೆ.