ಮಂಡ್ಯದ ಕೃಷ್ಣರಾಜಪೇಟೆಯ ಉಪ ಚುನಾವಣೆಯಲ್ಲಿ ಶತಾಯ ಗತಾಯ ಕಮಲ ಅರಳಿಸಲು ಧೃಡ ಸಂಕಲ್ಪ ಮಾಡಿದೆ ಬಿಜೆಪಿ. ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ ರಾಜ್ಯ ಬಿಜೆಪಿ ಯುವಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ.ವಿಶ್ವಕರ್ಮ ಜನಾಂಗದ ಬಂಧುಗಳ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ, ಬದಲಾವಣೆಯ ಗಾಳಿ ಬೀಸುತ್ತಿದೆ. ನನ್ನ ತಂದೆಯವರ ಆಸೆ ಈಡೇರಿಸುವ ಸಮಯ ಬಂದಿದೆ. ಯಡಿಯೂರಪ್ಪರ ಜನ್ಮಭೂಮಿಯಲ್ಲಿ ಕಮಲ ಅರಳುವುದು ನಿಶ್ಚಯವಾಗಿದೆ ಎಂದರು.ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ