Normal 0 false false false EN-US X-NONE X-NONE ಬೆಂಗಳೂರು : ಕೊರೊನಾ ಬಗ್ಗೆ ಬಿಜೆಪಿ ಸರ್ಕಾರ ದಿನಕ್ಕೊಂದು ಮಾಹಿತಿ ನೀಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಸಂಕಷ್ಟ, ಆರೋಗ್ಯ ಸಂಕಷ್ಟ ಎರಡೂ ಬಂದಿದೆ. ವೆಂಟಿಲೇಟರ್ ಖರೀದಿಯಲ್ಲೂ ಅವ್ಯವಹಾರ ನಡೆದಿದೆ. ವಿಪಕ್ಷವಾಗಿ ನಾವು ಇದರ ವಿರುದ್ಧ ಹೋರಾಡುತ್ತೇವೆ. ಜನರಿಗಾಗಿ ನಾವು ಸಹಾಯವಾಣಿ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.