ಬೇರೆ ಪಕ್ಷದಿಂದ ಬರೋರು ಕೇವಲ ಅಧಿಕಾರಕ್ಕಾಗಿ ಬರ್ತಾರೆ ಎಂದು ಪಕ್ಷಾಂತರಿಗಳ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ವಿಧಾನಪರಿಷತ್ನ ಅಧಿವೇಶನದಲ್ಲಿ ವಿಮಲಾಗೌಡರಿಗೆ ಶೃದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರ ವಿರುದ್ಧವೇ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡು ಘಟನೆ ನಡೆಯಿತು. ಅಂದು ನಾನು ರಾಜಕೀಯಕ್ಕೆ ಪ್ರವೇಶಿಸಿದಾಗ ಹಿರಿಯ ನಾಯಕಿ ವಿಮಲಾಗೌಡ ನನ್ನ ವಿರುದ್ಧ ಸೋಲನುಭವಿಸಿದ್ದರು. ಅವರಿಗೆ ಧೈರ್ಯದಿಂದಿರುವಂತೆ ಹೇಳಲು ಅವರ ಮನೆಗೆ ತೆರಳಿದ್ದೆ. ಆಗ ಅವರು ನಾನು