ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್‍ ಗೆ ಬಂದ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ- ಈಶ್ವರಪ್ಪ ವಾಗ್ದಾಳಿ

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (07:01 IST)

ಬೆಂಗಳೂರು : ಆಪರೇಷನ್ ಜನಕ ಎಂದರೇ ಮಾಜಿ ಸಿಎಂ ಸಿದ್ದರಾಮಯ್ಯ, ಅವರು ಕಾಂಗ್ರೆಸ್‍ಗೆ ಹೋದಾಗಲೇ ರಾಜ್ಯದಲ್ಲಿ ಆಪರೇಷನ್ ಶುರುವಾಗಿದ್ದು ಎಂದು ಶಾಸಕ ಅವರು ಆರೋಪ ಮಾಡಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನಾನು ಆಡಿಯೋ ತನಿಖೆ ಬಗ್ಗೆ ಮಾತನಾಡುವ ವೇಳೆ ಕಳ್ಳನ ಕೈಗೆ ಬೀಗ ಕೊಟ್ಟಿದ್ದಾರೆ ಎಂದಿದ್ದಕ್ಕೆ ಆಡಳಿತ ಪಕ್ಷಕ್ಕೆ ಅಘಾತವಾಗಿರಬಹದು. ಅದು ಒಂದು ಭಾಗದಲ್ಲಿ ಸತ್ಯವೇ ಆಗಿದೆ. ಜೆಡಿಎಸ್ ಪಕ್ಷದಿಂದ ಅವರು ಎಲ್ಲವನ್ನು ಪಡೆದುಕೊಂಡು ಕಾಂಗ್ರೆಸ್ ಸೇರುವ ಮೂಲಕ ಮೊದಲು ಆಪರೇಷನ್ ಸಂಸ್ಕೃತಿ ಜಾರಿ ಮಾಡಿ ಜನಕರಾಗಿದ್ದಾರೆ. ಬಿಎಸ್‍ವೈ ಅವರ ಮೇಲೆ ಆರೋಪ ಮಾಡುವ ಮುನ್ನ ಸಿದ್ದರಾಮಯ್ಯ ಅವರು ಎಷ್ಟು ಹಣ ಪಡೆದು ಕಾಂಗ್ರೆಸ್‍ಗೆ ಬಂದಿದ್ದರು ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.


‘ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್‍ಗೆ ಬಂದ ಸಿದ್ದರಾಮಯ್ಯ ಅವರು ಸತ್ಯಾಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಸದನದಲ್ಲಿ ತನಿಖೆಯನ್ನು ಎಸ್‍ ಐಟಿಗೆ ನೀಡುವ ತೀರ್ಮಾನ ಮಾಡಿದ ವೇಳೆ ವಿರೋಧ ವ್ಯಕ್ತಪಡಿಸಿದ್ದೇವೆ. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಮೂಲಕವೇ ಪ್ರಕರಣದ ವಿಚಾರಣೆ ನಡೆಸಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೈ ಶಾಸಕರ ಅನರ್ಹಕ್ಕೆ ಕಾಂಗ್ರೆಸ್ ಮನವಿ

ಕಾಂಗ್ರೆಸ್ ನ ಅತೃಪ್ತ ನಾಲ್ವರು ಶಾಸಕರ ವಿರುದ್ಧ ಶಿಸ್ತು ಕ್ರಮಕ್ಕೆ ಕೈಪಡೆಯ ನಾಯಕರು ಮುಂದಾಗಿದ್ದಾರೆ.

news

ಆಪರೇಷನ್ ಆಡಿಯೋ; ತನಿಖೆಗೆ ಸಭಾಧ್ಯಕ್ಷ ಸೂಚನೆ

ಆಪರೇಷನ್ ಕಮಲ ಕುರಿತ ಆಡಿಯೋ ಇಂದು ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

news

ಪ್ರತ್ಯೇಕ ತಾಲೂಕಿಗೆ ಒತ್ತಾಯಿಸಿದ ಬಂದ್ ಯಶಸ್ವಿ!

ಪ್ರತ್ಯೇಕ ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ನಡೆಸಲಾದ ಕುಶಾಲನಗರ ಬಂದ್ ಯಶಸ್ವಿಯಾಗಿದೆ.

news

ಉತ್ತರ ಕರ್ನಾಟಕ ಪಕ್ಷ ಸ್ಥಾಪನೆಗೆ ಜನಾಭಿಪ್ರಾಯ ಸಂಗ್ರಹ ಶುರು!

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗಬೇಕು ಎಂಬುದು ಬಹುತೇಕರ ಅಭಿಪ್ರಾಯ ವ್ಯಕ್ತವಾಗುತ್ತಿರುವ ...