ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಇಸ್ಕಾನ್ ವತಿಯಿಂದ ಸಾಂಸ್ಕೃತಿಕ ಉತ್ಸವವನ್ನು ಜುಲೈ16ರಿಂದ 23ರ ವರೆಗೆ ಹುಬ್ಬಳ್ಳಿ ನಗರದ ರಾಯಾಪೂರದ ಇಸ್ಕಾನ್ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷರ ರಾಜೀವ ಲೋಚನದಾಸ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಮುಂದಿನ ಪೀಳಿಗೆಗೆ ಭಾರತೀಯ ಪರಂಪರೆಯನ್ನು ಬಿತ್ತುವ ಹಾಗೂ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸಾಂಸ್ಕೃತಿಕ ಉತ್ಸವ ಅತಿದೊಡ್ಡ