ಬೆಂಗಳೂರು : ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಹೆಚ್ಚಿನವರು ಶೀತ-ಕೆಮ್ಮು, ಕಫ, ಜ್ವರ, ಚರ್ಮ ಒಣಗುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕಾಗಿ ಈ ಸಮಯದಲ್ಲಿ ದೇಹವನ್ನು ಬೆಚ್ಚಗಿಡುವ ಕೆಲವೊಂದು ಆಹಾರವನ್ನು ತಿನ್ನಬೇಕಾಗುತ್ತದೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ರಾಗಿ : ಚಳಿಗಾಲದಲ್ಲಿ ರಾಗಿ ಸೇವನೆ ಮಾಡಬೇಕು. ಇದರಲ್ಲಿ ಮೆಗ್ನೀಸಿಯಂ, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಬಿ, ಆಂಟಿಆಕ್ಸಿಡೆಂಟ್ ಹಾಗೂ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದಿನಪೂರ್ತಿ ದೇಹಕ್ಕೆ ಶಕ್ತಿ ನೀಡುತ್ತದೆ. ಬಾದಾಮಿ : ಚಳಿಗಾಲದಲ್ಲಿ