ಗ್ಯಾರೆಂಟಿ ಯೋಜನೆ ಜಾರಿ ವಿಚಾರವಾಗಿ ಡಿಸಿಎಂ ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದು,ನಾವೇನು ಮಾತು ಕೊಟ್ಟಿದ್ವೊ ಅದನ್ನ ಉಳಿಸಿಕೊಳ್ಳುತ್ತೇವೆ.5 ಯೋಜನೆಗಳನ್ನು ಜಾರಿಗೆ ತರುತ್ತೇವೆ.ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳೋಕೆ ಆಗ್ತಿಲ್ಲ.ಒಂದು ಕಾಳು ಕಡಿಮೆಯಾದ್ರೂ ಪ್ರತಿಭಟನೆ ಮಾಡೋದಾಗಿ ಹೇಳಿದ್ದಾರೆ.365 ದಿನವೂ ಪ್ರತಿಭಟನೆ ಮಾಡಲಿ.ಅವರು ಹೋರಾಟ ಮಾಡ್ತಿರಬೇಕು,ವಿರೋಧ ಮಾಡ್ತಿರಬೇಕು,ಬಿಜೆಪಿಯವರು ವಿಪಕ್ಷದಲ್ಲಿ ಕೂತಿರಬೇಕು.ನಾವು ಆಡಳಿತದಲ್ಲಿ ಜನರ ಸೇವೆ ಮಾಡುತ್ತಿರಬೇಕು ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.