ಸಮಾವೇಶಕ್ಕೆ ಬಂದವರೆಲ್ಲಾ ಸುಮಲತಾ ಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ- ಸಚಿವ ಡಿ.ಸಿ ತಮ್ಮಣ್ಣ

ಮಂಡ್ಯ, ಗುರುವಾರ, 21 ಮಾರ್ಚ್ 2019 (20:24 IST)

: ಸುಮಲತಾ ಸಮಾವೇಶಕ್ಕೆ ಹೊರಗಿನ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿದೆ ಎಂದು ಸಾರಿಗೆ ಸಚಿವ ಹೇಳಿಕೆ ನೀಡಿದ್ದಾರೆ.


ಈ ಬಗ್ಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, ‘ಸುಮಲತಾ ಅವರ ಸಮಾವೇಶದಲ್ಲಿ ನಮ್ಮ ಅಂಬರೀಶ್ ಅವರ ಅಭಿಮಾನಿಗಳು ಹೋಗಿರುತ್ತಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಸುಮಲತಾ ಅವರ ಬೃಹತ್ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಹೆಚ್ಚಾಗಿ ಹೊರಗಿನಿಂದ ಜನ ಕರೆಸಲಾಗಿದೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ ಎನ್ನುವ ವಿಷಯ ಗೊತ್ತಾಯಿತು’ ಎಂದು ಹೇಳಿದ್ದಾರೆ.


ಸಮಾವೇಶದಲ್ಲಿ ನಮ್ಮವರು ಹಾಗೂ ಅವರ ಕಡೆಯವರು ಬಂದಿರುತ್ತಾರೆ. ಹಾಗಂತ ಅಲ್ಲಿ ಇದ್ದ ಜನರೆಲ್ಲಾ ಸುಮಲತಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಅಧಿಕಾರದಲ್ಲಿರುವ ಕಾರಣ ಕೆಲ ಕಾಂಗ್ರೆಸ್ ನಮ್ಮ ಜೊತೆ ಬರಲು ಒಪ್ಪಿದ್ದಾರೆ. ಅಲ್ಲದೆ ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

SSLC ಪರೀಕ್ಷೆಗೆ ಹಬ್ಬದ ವಾತಾವರಣ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ಹಬ್ಬದ ವಾತಾವರಣ ಅಲ್ಲ ...

news

ಗುಮ್ಮಟನಗರಿಯಲ್ಲಿ ರಂಗ ಬರಸೇ ಸಂಭ್ರಮ…

ಗುಮ್ಮಟ ನಗರಿ ವಿಜಯಪುರದಲ್ಲಿ ಬಣ್ಣದಾಟದ ಸಡಗರ ಮನೆ ಮಾಡಿತ್ತು.

news

ಗಡಿ ಜಿಲ್ಲೆಯಲ್ಲಿ ಹೋಳಿ ಸಂಭ್ರಮ

ದೇಶಾದ್ಯಂತ ಇಂದು ಹೋಲಿ‌ ಹಬ್ಬದ ಸಂಭ್ರಮ. ಗಡಿ ಜಿಲ್ಲೆಗಳಲ್ಲಿಯೂ ಬಣ್ಣದ ಓಕಳಿ ಜೋರಾಗಿತ್ತು.

news

ನಡು ರಸ್ತೆಯಲ್ಲಿ ನಾಗರಹಾವು ಮಾಡಿದ್ದೇನು?

ಮನೆಯೊಂದರಲ್ಲಿ ಸೇರಿಕೊಂಡಿದ್ದ ನಾಗರಹಾವೊಂದು ನಡುರಸ್ತೆಗೆ ಬಂದ ಘಟನೆ ನಡೆದಿದೆ.