ಮುದ್ದು ಸಾಕುಪ್ರಾಣಿಗಳ ದೃಶ್ಯಗಳನ್ನು ನೋಡುವ ಆನಂದವೇ ಬೇರೆ. ಮನಸ್ಸಿಗೆ ವಿಭಿನ್ನ ಹಿತ ನೀಡುತ್ತವೆ. ಸಾಕುಪ್ರಾಣಿಗಳ ಮುಗ್ಧತೆ, ಮುದ್ದಾದ ನೋಟ ಅರೆಕ್ಷಣದಲ್ಲಿ ನಮ್ಮ ಹೃದಯ ಸೆಳೆಯುತ್ತದೆ. ಅಂತದ್ದೇ ದೃಶ್ಯವೊಂದು ನೆಟ್ಟಿಗರ ಹೃದಯ ಗೆದ್ದಿದೆ. ಇಲ್ಲೊಬ್ಬಳು ಮುದ್ದು ಶ್ವಾನ ತನ್ನ ಕಂದಮ್ಮಗಳು ತನ್ನೊಂದಿಗೆ ಯಾಕೆ ಆಡುತ್ತಿಲ್ಲ ಎಂದು ಗೊಂದಲದಲ್ಲಿದ್ದಳು. ಇವಳ ಆ ಮುಗ್ಧ ನೋಟವೇ ಅವಳ ಹೃದಯದ ಭಾವನೆಗೆ ಕನ್ನಡಿಯಂತಿತ್ತು. @Yoda4ever ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯವನ್ನು ಅಪ್ ಲೋಡ್ ಮಾಡಲಾಗಿದೆ.