Widgets Magazine

ಬಾದಾಮಿಯಲ್ಲಿ ಕಾಂಗ್ರೆಸ್ ಗೆ ಬೆಳ್ಳಂ ಬೆಳಿಗ್ಗೆಯೇ ಶಾಕ್

ಬಾಗಲಕೋಟೆ| Krishnaveni K| Last Modified ಮಂಗಳವಾರ, 8 ಮೇ 2018 (09:01 IST)
ಬಾಗಲಕೋಟೆ: ಮತ್ತು ಬಿ ಶ್ರೀರಾಮುಲು ಸ್ಪರ್ಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಳ್ಳಂ ಬೆಳಿಗ್ಗೆಯೇ ಐಟಿ ಶಾಕ್ ನೀಡಿದೆ.


ಮಧ್ಯರಾತ್ರಿಯೇ ಕಾಂಗ್ರೆಸ್ ನಾಯಕ ಆನಂದ್ ಸಿಂಗ್ ಒಡೆತನದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 10 ಮಂದಿ ಐಟಿ ಇಲಾಖೆ ಅಧಿಕಾರಿಗಳು ಬಿಗಿ ಭದ್ರತೆ ನಡುವೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.


ಎರಡು ದಿನಗಳ ಹಿಂದಷ್ಟೇ ಸಿಎಂ ಸಿದ್ದರಾಮಯ್ಯ ಈ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಐಟಿ ಅಧಿಕಾರಿಗಳು ದಾಳಿ ನಡೆಸಲು ಬಂದಾಗ ಸಿಎಂ ಆಪ್ತ ಸಿಎಂ ಇಬ್ರಾಹಿಂ ಅದೇ ರೆಸಾರ್ಟ್ ನಲ್ಲಿ ತಂಗಿದ್ದರು. ಆದರೆ ಐಟಿ ಅಧಿಕಾರಿಗಳು ಬರುತ್ತಿದ್ದಂತೆ ರಾತ್ರೋ ರಾತ್ರಿ ರೆಸಾರ್ಟ್ ನಿಂದ ತೆರಳಿದ್ದಾರೆ. ಆನಂದ್ ಸಿಂಗ್ ಕೆಲವು ದಿನಗಳ ಹಿಂದಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :