ಸತತ 2ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ 2 ನಿವಾಸಗಳಲ್ಲಿ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಈ ಮಧ್ಯೆ 5 ಲಾಕರ್`ಗಳ ಪೈಕಿ ನಿನ್ನೆ 2 ಲಾಕರ್`ಗಳನ್ನ ಓಪನ್ ಮಾಡಲಾಗಿದ್ದು, ಇಂದು ನಕಲಿ ಕೀ ಮಾಡುವವರನ್ನ ಕರೆ ತಂದು 2 ಲಾಕರ್`ಗಳನ್ನ ಓಪನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಲಾಕರ್`ಗಳಲ್ಲಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಸಿಕ್ಕಿವೆ ಎಂಬ ಬಗ್ಗೆ ಮಾಧ್ಯಮಗಳು ವರದಿ