ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳ ತಪಾಸಣೆ ಮುಂದುವರಿದಿದೆ. ಈ ನಡುವೆ ಸದಾಶಿವನ ನಗರದ ನಿವಾಸಕ್ಕೆ ಅಣ್ಣನ ಭೇಟಿಗೆ ಬಂದ ಸಹೋದರ ಡಿಕೆ ಸುರೇಶ್ ಅವರನ್ನು ಭದ್ರತಾ ಸಿಬ್ಬಂದಿ ತಡೆದ ಘಟನೆ ನಡೆದಿದೆ.ತಮ್ಮ ಬೆಂಬಲಿಗರ ಜತೆ ಬಂದ ಡಿಕೆ ಸುರೇಶ್ ಅವರನ್ನು ಐಟಿ ತಪಾಸಣೆ ಮುಗಿಯುವವರೆಗೆ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಭದ್ರತಾ ಸಿಬ್ಬಂದಿ ತಡೆದರು. ಹೀಗಾಗಿ ಸುರೇಶ್ ಮತ್ತು ಬೆಂಬಲಿಗರು ಸಿಬ್ಬಂದಿ ವಿರುದ್ಧ ಆಕ್ರೋಶ