ಕಳೆದ ಎರಡು ದಶಕಗಳಿಂದ ಆಗದ್ದು ಈಗ ಖಾಲಿ ಆಗಿದೆ. ಜನರು ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುತ್ತಿದ್ದ ಹಳ್ಳ ಈ ಬಾರಿ ಖಾಲಿ ಆಗಿರೋದು ಅಲ್ಲಿನ ಜನರಲ್ಲಿ ಚಿಂತೆಗೀಡುಮಾಡಿದೆ. ಈ ಮೂಲಕ ಜನರೂ ಸೇರಿ ಮೂಕ ಪ್ರಾಣಿಗಳು ಕಂಗಾಲಾಗಿವೆ.ರಾಯಚೂರು ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಬರಗಾಲ ಕಳೆದ ಎರಡು ದಶಕಗಳಲ್ಲಿ ಬತ್ತದ ಹಳ್ಳವನ್ನು ಈ ಬಾರಿ ಖಾಲಿ ಮಾಡಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ-ಜಂಬಲದಿನ್ನಿ ಹಳ್ಳ ಯಾವುದೇ ಬರಗಾಲಕ್ಕೂ ಜಗ್ಗಿರಲಿಲ್ಲ.